ಅಭಿಪ್ರಾಯ / ಸಲಹೆಗಳು

ಕಾರ್ಡಿಯೋಥೊರಾಸಿಕ್

ಕಾರ್ಡಿಯೋಥೊರಾಸಿಕ್ ಸರ್ಜರಿ ವಿಭಾಗ

      ಕಾರ್ಡಿಯೋ-ಥೊರಾಸಿಕ್ ಶಸ್ತ್ರಚಿಕಿತ್ಸಾ ವಿಭಾಗವು ಹೃದಯ ಮತ್ತು ಎದೆ(ಥೊರಾಕ್ಸ್)ಯೊಳಗಿನ ಅಂಗಗಳ ಮೇಲೆ ಪರಿಣಾಮ ಬೀರುವ ಖಾಯಿಲೆಗಳನ್ನು ಒಳಗೊಂಡಂತೆ,  ರೋಗದ ಸ್ಥಿತಿಗತಿಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡುತ್ತದೆ. ವಿಶ್ವದ ಅತ್ಯುತ್ತಮ ಸಂಸ್ಥೆಗಳಿಂದ ತರಬೇತಿ ಪಡೆದ ದೇಶದಲ್ಲಿಯೇ ಅತ್ಯುತ್ತಮವಾದ ಮೀಸಲು ಸಿಬ್ಬಂದಿಗಳನ್ನು ಈ ವಿಭಾಗವು  ಹೊಂದಿದೆ. ಹೃದಯ-ಥೊರಾಸಿಕ್ ಶಸ್ತ್ರಚಿಕಿತ್ಸೆಗೆ ಜಯದೇವ ಆಸ್ಪತ್ರೆಯು ಅತ್ಯುತ್ತಮ ಕೇಂದ್ರವಾಗಿದ್ದು, ಅಂತರರಾಷ್ಟ್ರೀಯ ರೋಗಿಗಳು ಸೇರಿದಂತೆ ಸಾವಿರಾರು ರೋಗಿಗಳು ಹೃದ್ರೋಗ ಚಿಕಿತ್ಸೆಗಾಗಿ ಆಕರ್ಷಿತರಾಗಿ ಬರುತ್ತಾರೆ ಮತ್ತು ವಾಸ್ತವಿಕವಾಗಿ ಎಲ್ಲಾ ವಿಧವಾದ ಹೃದಯ ಶಸ್ತ್ರಚಿಕಿತ್ಸೆಯನ್ನು ಇಲ್ಲಿ ಮಾಡಲಾಗುತ್ತದೆ. 

     ಸುಧಾರಿತ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಸಾಧನಗಳನ್ನು ಬಳಸಿಕೊಂಡು, ತಜ್ಞ ವೈದ್ಯರು ಮತ್ತು ದಾದಿಯರ ತಂಡವು ರೋಗಿ-ಕೇಂದ್ರಿತ ಆರೈಕೆಯೊಂದಿಗೆ ಪುರಾವೆ ಆಧಾರಿತ ಸಂಯೋಜಿಸಲ್ಪಟ್ಟ ಔಷಧ ಅಭ್ಯಾಸವನ್ನು ಹೊಂದಿದೆ. ಜಯದೇವ ಆಸ್ಪತ್ರೆಯಲ್ಲಿನ ಕಾರ್ಡಿಯೋ-ಥೊರಾಸಿಕ್ ತಂಡವು ಕನಿಷ್ಠ ಆಕ್ರಮಣಕಾರಿ ಶಸ್ತ್ರಚಿಕಿತ್ಸೆ (ಮಿನಿಮಲಿ ಇನ್ವೇಸಿವ್‌ ಸರ್ಜರಿ)‌ ಯನ್ನು ಸಹ ಮಾಡಿದ ಅನುಭವವನ್ನು ಹೊಂದಿದೆ. ಸಂಸ್ಥೆಯು ಪ್ರತಿಯೊಬ್ಬ ರೋಗಿಯನ್ನು ವಿಶಿಷ್ಟ ಎಂದು ಪರಿಗಣಿಸಿ,  ಇಂಟರ್ವೆನ್ಷನ್‌ ಕಾರ್ಯಾವಿಧಾನಗಳಿಂದ ಮೊದಲುಗೊಂಡು ಕಾರ್ಡಿಯೋ-ಥೊರಾಸಿಕ್ ಶಸ್ತ್ರಚಿಕಿತ್ಸೆ ಮತ್ತು ಪುನರ್ವಸತಿವರೆಗೆ ವೈಯಕ್ತಿಕ ಆರೈಕೆಯನ್ನು ನೀಡುತ್ತದೆ.  ಜಯದೇವ ಆಸ್ಪತ್ರೆಯಲ್ಲಿನ ಕಾರ್ಡಿಯೋ-ಥೊರಾಸಿಕ್ ತಂಡವು ನವಜಾತ ತೆರೆದ ಹೃದಯ ಶಸ್ತ್ರಚಿಕಿತ್ಸೆಗಳಿಂದ ಮಹಾಪಧಮನಿಯ ಶಸ್ತ್ರಚಿಕಿತ್ಸೆಗಳವರೆಗೆ, ಅತ್ಯುತ್ತಮ ಫಲಿತಾಂಶಗಳೊಂದಿಗೆ ವ್ಯಾಪಕ ಶ್ರೇಣಿಯ ಶಸ್ತ್ರಚಿಕಿತ್ಸೆಗಳನ್ನು ಮಾಡಿದೆ.

    

 

ವ್ಯಾಸ್ಕುಲರ್ ಸರ್ಜರಿ ವಿಭಾಗ

      ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿನ ಫೆರಿಫೆರಲ್ ವ್ಯಾಸ್ಕುಲರ್ ಮತ್ತು ಎಂಡೋವ್ಯಾಸ್ಕುಲರ್ ಸರ್ಜರಿ ವಿಭಾಗವನ್ನು 2010 ರಲ್ಲಿ ಪ್ರಾರಂಭಿಸಲಾಯಿತು, ಇದು ಕರ್ನಾಟಕದ ಸರ್ಕಾರಿ ವಲಯದ ಮೊದಲ ಸಮಗ್ರ ರಕ್ತ ನಾಳ (ವ್ಯಾಸ್ಕುಲರ್) ಚಿಕಿತ್ಸೆಯ ಘಟಕವಾಗಿದೆ. 

     ನಮ್ಮ ಅರ್ಹ ಮತ್ತು ಹೆಚ್ಚು ಬದ್ಧವಾದ ರಕ್ತ ನಾಳ (ವ್ಯಾಸ್ಕುಲರ್) ಶಸ್ತ್ರಚಿಕಿತ್ಸಕರ ತಂಡವು ಹೃದಯ ಮತ್ತು ಮೆದುಳಿನ ಸುತ್ತಲಿನ ಭಾಗವನ್ನು ಹೊರತುಪಡಿಸಿ ದೇಹದಲ್ಲಿನ ಅಪಧಮನಿ ಮತ್ತು ಅಭಿದಮನಿಯ ರಕ್ತನಾಳಗಳನ್ನು ಒಳಗೊಂಡ ರಕ್ತ ನಾಳಗಳ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ. 

     ನಮ್ಮ ಉತ್ತಮ ತರಬೇತಿ ಪಡೆದ ತಂಡವು ತೆರೆದ ಶಸ್ತ್ರಚಿಕಿತ್ಸೆಗಳು ಮಾತ್ರವಲ್ಲದೆ ಎಂಡೋವಾಸ್ಕುಲರ್ ಇಂಟರ್ವೆನ್ಷನ್‌ ನಂತಹ ಕಾರ್ಯವಿಧಾನಗಳಲ್ಲಿ ತರಭೇತಿ ಹೊಂದಿರುವುದರಿಂದ ಉತ್ತಮ ಫಲಿತಾಂಶಗಳಿಗಾಗಿ ಈ  ವಿಶೇಷ ಕಾರ್ಯವಿಧಾನಗಳ ತಿಳುವಳಿಕೆಯುಳ್ಳ ಆಯ್ಕೆಗೆ  ಕಾರಣವಾಗಿದೆ. 

     ನಮ್ಮ ಸಂಸ್ಥೆಯ ವ್ಯಾಸ್ಕ್ಯುಲರ್‌ ಸರ್ಜರಿ ವಿಭಾಗವು ಕರ್ನಾಟಕದ ಅತ್ಯಂತ ಸಕ್ರಿಯವಾದ ರಕ್ತ ನಾಳ ವಿಭಾಗವಾಗಿದ್ದು, ಒಂದು ವರ್ಷದಲ್ಲಿ 12,000 ಕ್ಕೂ ಅಧಿಕ ಹೊರರೋಗಿಗಳು ಭೇಟಿ ನೀಡುತ್ತಿದ್ದು, 400 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ.  

     ವ್ಯಾಸ್ಕ್ಯುಲರ್‌ ಸರ್ಜರಿ ವಿಭಾಗಕ್ಕೆ ಪ್ರತ್ಯೇಕ ಹೈಬ್ರಿಡ್ ಕ್ಯಾಥ್ಲ್ಯಾಬ್‌ ಅನ್ನು ಮೀಸಲಿಟ್ಟಿದ್ದು, ಮುಂಬರುವ ವರ್ಷಗಳಲ್ಲಿ ಕಾರ್ಯವಿಧಾನಗಳ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.

     

ನೀಡಲಾಗುವ ಸೇವೆಗಳು:

 • ಅನ್ಯೂರಿಸಮ್ ಸರ್ಜರಿ - ಓಪನ್ ಮತ್ತು ಎಂಡೋವಾಸ್ಕುಲರ್ ಅನ್ಯೂರಿಸಮ್ (ಇ.ವಿ.ಎ.ಆರ್ / ಟಿ.ವಿ.ಎ.ಆರ್ / ಚಿಮಣಿ / ಹೈಬ್ರಿಡ್ ಡಿಬ್ರಾಂಚಿಂಗ್ ಮತ್ತು ಟಿ.ವಿ.ಎ.ಆರ್) ಇತ್ಯಾದಿ

 • ಅಪಧಮನಿಯ ಬೈಪಾಸ್ ಶಸ್ತ್ರ ಚಿಕಿತ್ಸೆ - ಮಹಾಪಧಮನಿಯ-ಇಲಿಯಾಕ್, ಮಹಾಪಧಮನಿಯ ಫಿಮೋರಲ್‌, ಫಿಮೋರಲ್‌ ಪಾಪ್ಲಿಟಿಯಲ್/ ಫಿಮೋರಲ್‌ ಡಿಸ್ಟಲ್ ಬೈಪಾಸ್ ಮತ್ತು ಕರುಳಿನ ರಕ್ತ ನಾಳ ಬೈಪಾಸ್ (ಕರುಳಿನ ರಕ್ತ ಪೂರೈಕೆ)

 • ಬಾಹ್ಯ ಅಪಧಮನಿ ರಕ್ತನಾಳದಲ್ಲಿ ಎಂಡೊವಾಸ್ಕುಲರ್ ಇಂಟರ್ನ್‌ವೆನ್ಷನ್‌ ಮತ್ತು ಕರುಳಿನ ರಕ್ತ ನಾಳಗಳ ಚಿಕಿತ್ಸೆ.

 • ಕೆರೊಟಿಡ್‌ ಇಂಟರ್ವೆನ್ಷನ್ಸ್- ಕೆರೊಟಿಡ್‌‌ ಎಂಡಾರ್ಟೆರೆಕ್ಟೊಮಿ,ಕೆರೊಟಿಡ್‌ ಸ್ಟೆಂಟಿಂಗ್ ಮತ್ತು ತುಕೆರೊಟಿಡ್‌ ಗಡ್ಡೆಗಳು

 • ತೀವ್ರವಾದ ಅಪಧಮನಿಯ ರಕ್ತಕೊರತೆಯ ಥ್ರೋಂಬೆಕ್ಟಮಿ‌ /ಎಂಬೋಲೊಕ್ಟಮಿ (ಲಿಂಬ್‌ ಅಟ್ಯಾಕ್‌, ಕೈ ಮತ್ತು ಕಾಲಿನ ರಕ್ತ ನಾಳಗಳ ತುರ್ತು ಚಿಕಿತ್ಸೆ )

 • ಸರ್ವೈಕಲ್‌ ರಿಬ್‌ ಮತ್ತು ಥೊರಾಸಿಕ್‌ ಔಟ್ಲೆಟ್ ಸಿಂಡ್ರೋಮ್ ನಿರ್ವಹಣೆ

 • ವೀನಸ್ ಕಾಯಿಲೆಗಳು - ಉಬ್ಬಿರುವ ರಕ್ತನಾಳ‌ (ವೆರಿಕೋಸ್‌ ವೇನ್), ಡೀಪ್ ವೇನ್ ‌   ಥ್ರೋಂಬೋಸಿಸ್

 • ಡಯಾಲಿಸಿಸ್ಗೆ ಸಂಬಂಧಿಸಿದ ವ್ಯಾಸ್ಕುಲರ್ ಕಾರ್ಯವಿಧಾನಗಳು

 • ಅಪಘಾತದಿಂದಾಗಿ ಹಾನಿಗೊಳಗಾದ ರಕ್ತನಾಳಗಳ ನಿರ್ವಹಣೆ

ಇತ್ತೀಚಿನ ನವೀಕರಣ​ : 02-07-2021 09:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080