ಅಭಿಪ್ರಾಯ / ಸಲಹೆಗಳು

ಕಾರ್ಡಿಯಾಕ್ ಅರಿವಳಿಕೆ

ಕಾರ್ಡಿಯಾಕ್ ಅರವಳಿಕೆ ವಿಭಾಗ

     ಹೃದಯ ಅರಿವಳಿಕೆ ವಿಭಾಗವು ಐಸಿಯು ಆರೈಕೆ, ತೆರೆದ ಹೃದಯ ಶಸ್ತ್ರಚಿಕಿತ್ಸೆ ಅಥವಾ ಕಾರ್ಡಿಯಾಕ್‌ ಕ್ಯಾಥ್ ಕಾರ್ಯವಿಧಾನಗಳ ಅಗತ್ಯವಿರುವ ಹೃದಯ ರೋಗಿಗಳ ಎಲ್ಲಾ ನಿರ್ಣಾಯಕ ಆರೈಕೆಯ ಅಗತ್ಯತೆಗಳನ್ನು ನೋಡಿಕೊಳ್ಳುವ ಸಮರ್ಪಣಾ ಭಾವದ ವಿಶೇಷ ತಜ್ಞರನ್ನು ಹೊಂದಿದೆ. 

     ಇನ್ವೇಸಿವ್‌ ಮತ್ತು ನಾನ್- ಇನ್ವೇಸಿವ್‌ ವಾತಾಯನ (ವೆಂಟಿಲೇಟರ್), ರಕ್ತ ಅನಿಲ ವಿಶ್ಲೇಷಣೆ‌ (ಬ್ಲಡ್‌ ಗ್ಯಾಸ್‌ ಅನಲಿಸಿಸ್), ವೆಂಟಿಲೇಟರ್‌ನಿಂದ ವೀನಿಂಗ್ ಮುಂತಾದ ರೋಗಿಗಳ ಉಸಿರಾಟದ ಅವಶ್ಯಕತೆಗಳನ್ನು ವಿಶ್ಲೇಷಿಸುವ ಮೂಲಕ ಹೃದಯ ತೀವ್ರ ನಿಗಾ ಘಟಕದಲ್ಲಿ ರೋಗಿಯ ನಿರ್ವಹಣೆಗೆ ಸುಧಾರಿತ ವಿಧಾನಗಳನ್ನು ಬಳಸಿಕೊಳ್ಳುತ್ತದೆ. 

    ಪ್ರಾಥಮಿಕ ಆಂಜಿಯೋಪ್ಲ್ಯಾಸ್ಟೀಸ್ ಸೇರಿದಂತೆ ಕೊರೊನರಿ ಇಂಟರ್ವೆನ್ಷನ್ಗಳಂತಹ ಕ್ಯಾಥ್ಲ್ಯಾಬ್ ಕಾರ್ಯವಿಧಾನಗಳಲ್ಲಿ ಅರಿವಳಿಕೆ ತಜ್ಞರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ನಾನ್‌ ಕೊರೊನರಿ ಇಂಟರ್ವೆನ್ಷನ್ ಮತ್ತು ಎಲೆಕ್ಟ್ರೋಫಿಸಿಯೋಲಾಜಿಕಲ್ ಅಧ್ಯಯನಗಳ ಕಾರ್ಯವಿಧಾನವನ್ನು ಯಶಸ್ವಿಗೊಳಿಸಲು ಹೆಚ್ಚು ಜಾಗರೂಕ ಅರಿವಳಿಕೆ ತಜ್ಞರ ಅಗತ್ಯವಿರುತ್ತದೆ. ನವಜಾತ ಮತ್ತು ಪೀಡಿಯಾಟ್ರಿಕ್ ಕ್ಯಾಥ್ಲಾಬ್ ಕಾರ್ಯವಿಧಾನಗಳನ್ನು ನಿರ್ವಹಿಸುವಲ್ಲಿ ತಂಡವು ಪರಿಣತಿ ಹೊಂದಿದೆ.     

     ಅರವಳಿಕೆ ವಿಭಾಗವು ಶಸ್ತ್ರಚಿಕಿತ್ಸೆಯ ಪೂರ್ವ, ಶಸ್ತ್ರಚಿಕಿತ್ಸೆಯ ಸಮಯ ಮತ್ತು  ಶಸ್ತ್ರಚಿಕಿತ್ಸೆಯ ನಂತರ ಉಸಿರಾಟ ಮತ್ತು ಹೃದಯ ಆರೈಕೆಯನ್ನು ಒದಗಿಸುವ ಮೂಲಕ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ಹೆಚ್ಚಿನ ಆರೈಕೆ ನೀಡಲು ಹೃದಯ ಶಸ್ತ್ರಚಿಕಿತ್ಸಾ ತಂಡದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ. ಮೀಸಲಾದ ಶಿಶುವೈದ್ಯಕೀಯ ತಂಡವು ನವಜಾತ ಶಿಶುಗಳಿಂದ ಹಿಡಿದು ಅನೇಕ ಸಂಕೀರ್ಣ ಜನ್ಮಜಾತ ಹೃದಯ ಶಸ್ತ್ರಚಿಕಿತ್ಸೆಗಳವರೆಗೆ ಉತ್ತಮ ಫಲಿತಾಂಶಗಳೊಂದಿಗೆ ವ್ಯಾಪಕವಾದ ಮಕ್ಕಳ ಶಸ್ತ್ರಚಿಕಿತ್ಸೆಗೆ ವೈಯಕ್ತಿಕ ಅರಿವಳಿಕೆ ಮತ್ತು ನೋವು ನಿವಾರಕ ಆರೈಕೆಯನ್ನು ಒದಗಿಸುತ್ತದೆ.

ಇತ್ತೀಚಿನ ನವೀಕರಣ​ : 02-07-2021 09:19 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080