ಅಭಿಪ್ರಾಯ / ಸಲಹೆಗಳು

ಸಂಸ್ಥೆಯ ಬಗ್ಗೆ

                  ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ,ಬೆಂಗಳೂರು - ಮುಖ್ಯ ಕೇಂದ್ರ

 

 

           ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಯಾಗಿದ್ದು, ವಿಶೇಷವಾಗಿ ಹೃದಯ ಆರೈಕೆಗಾಗಿಯೇ (ಬೆಂಗಳೂರಿನ ಬನ್ನೇರುಘಟ್ಟರಸ್ತೆ ಯಲ್ಲಿರುವ ಕೇಂದ್ರ ಸ್ಥಾನ, ಬೆಂಗಳೂರಿನ  ರಾಜಾಜಿನಗರದ ಇಎಸ್‌ಐ-ಎಂಹೆಚ್‌ ಶಾಖೆ, ಮೈಸೂರು ಹಾಗೂ ಕಲಬುರಗಿ ಶಾಖೆಗನ್ನೊಳಗೊಂಡಂತೆ) 1600 ಹಾಸಿಗೆ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದು ಆಗ್ನೇಯ ಏಷ್ಯಾದ ಅತಿದೊಡ್ಡ ಏಕೈಕ ಹೃದ್ರೋಗ ಚಿಕಿತ್ಸಾ ಕೇಂದ್ರವಾಗಿದೆ. ಇದು ಸಂಪೂರ್ಣವಾಗಿ ಹೃದ್ರೋಗ ಆರೈಕೆ ಮಾಡುವ ಲಾಭರಹಿತ ಸಂಸ್ಥೆಯಾಗಿದ್ದು ಸಮಾಜದ ಎಲ್ಲಾ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಹೃದ್ರೋಗ ಚಿಕಿತ್ಸೆಯನ್ನು ಒದಗಿಸುತ್ತಿದೆ ಮತ್ತು ಅರ್ಹ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುತ್ತದೆ. ನಾವು “ಚಿಕಿತ್ಸೆ ಮೊದಲು ಪಾವತಿ ನಂತರ” ಎಂಬ ಪರಿಕಲ್ಪನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದೇವೆ. ತುರ್ತು ಹೃದ್ರೋಗ ಚಿಕಿತ್ಸೆ ಅಗತ್ಯವಿರುವ ರೋಗಿಗೆ ಯಾವುದೇ ಮುಂಗಡ ಪಾವತಿಗೆ ಒತ್ತಾಯಿಸದೆ ಚಿಕಿತ್ಸೆ ನೀಡಲಾಗುತ್ತಿದೆ.

                    ಸಂಸ್ಥೆಯು ಕಳೆದ 15 ವರ್ಷಗಳಲ್ಲಿ ಶೇ.500ರಷ್ಟು ಪ್ರಗತಿಯನ್ನು ದಾಖಲಿಸಿದೆ.

        ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡಿರುವ 12 ಕ್ಯಾತ್‌ಲ್ಯಾಬ್‌ಗಳು, 12 ಶಸ್ತ್ರಚಿಕಿತ್ಸಾ ಕೊಠಡಿಗಳು, ನಾನ್‌-ಇನ್‌ವ್ಯಾಸೀವ್‌ ಪ್ರಯೋಗಾಲಯಗಳು ಮತ್ತು 24 ಗಂಟೆಗಳ ತುರ್ತು ಘಟಕವನ್ನು ಹೊಂದಿದೆ.

        ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು 2015ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಕ್ವಾಲಿಟಿ ಕೌನ್ಸಿಲ್‌ ಆಫ್‌ ಇಂಡಿಯಾದಿಂದ ಎನ್‌ಎಬಿಹೆಚ್‌ ಮಾನತ್ಯೆಯನ್ನು ಪಡೆದುಕೊಂಡಿದೆ ಮತ್ತು ಇದು 2018 ರಲ್ಲಿ ಎನ್‌ಎಬಿಹೆಚ್‌ ಮರು ಮಾನ್ಯತೆ ಪಡೆದ ದೇಶದ ಮೊದಲ ಸಾರ್ವಜನಿಕ ಹೃದ್ರೋಗ ಸಂ‍ಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

        ಬೋಧನಾ ವಿಭಾಗದಲ್ಲಿ ಮೆಡಿಕಲ್‌ ಕೌನ್ಸಿಲ್‌ ಆಫ್‌ ಇಂಡಿಯಾ ದಿಂದ ಡಿ.ಎಂ.ಕಾರ್ಡಿಯಾಲಜಿಯಲ್ಲಿ 23 ಸ್ನಾತಕೋತ್ತರ ಸೀಟುಗಳು, ಪೀಡಿಯಾಟ್ರಿಕ್‌ ಕಾರ್ಡಿಯಾಲಜಿಯಲ್ಲಿ 2 ಸೀಟುಗಳನ್ನು ಒಳಗೊಂಡಂತೆ, ಎಂ.ಸಿ.ಹೆಚ್‌ ಕಾರ್ಡಿಯಾಕ್‌ ಸರ್ಜರಿಯಲ್ಲಿ 12 ಸೀಟುಗಳು ಮತ್ತು ಡಿ.ಎಂ. ಕಾರ್ಡಿಯಾಕ್‌ ಅರವಳಿಕೆಯಲ್ಲಿ 8 ಸೀಟುಗಳು ಮಂಜೂರಾಗಿದ್ದು ಇದು ದೇಶದ ಅತಿದೊಡ್ಡ ಸೂಪರ್‌ ಸ್ಪೆಷಾಲಿಟಿ ಸ್ನಾತಕೋತ್ತರ ಬೋಧನಾ ಸಂಸ್ಥೆಯಾಗಿದೆ.

       ಪ್ರಸ್ತುತ ಪ್ರತಿದಿನ ಸರಾಸರಿ 1200-1400 ರೋಗಿಗಳು ಈ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. 2020ರ ಅವಧಿಯಲ್ಲಿ 391587 ಹೊರ ರೋಗಿಗಳು ಮತ್ತು 42008 ಒಳ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಸುಮಾರು 2000 ತೆರೆದ ಹೃದಯ ಶಸ್ತ್ರಚಿಕಿತ್ಸೆಗಳು, ಕರೋನರಿ ಆಂಜಿಯೋಗ್ರಾಮ್‌, ಆಂಜಿಯೋಪ್ಲಾಸ್ಟೀಸ್‌, ವಾಲ್ವುಲೋಪ್ಲಾಸ್ಟೀಸ್‌, ಪೇಸ್‌ಮೇಕರ್‌, ಡಿವೈಸ್‌ ಕ್ಲೋಷರ್‌ ಮತ್ತು ಇತರ ಕಾರ್ಯವಿಧಾನಗಳನ್ನು ಒಳಗೊಂಡ 30886 ಕ್ಯಾತ್‌ಲ್ಯಾಬ್‌ ಕಾರ್ಯವೀಧಾನಗಳನ್ನು ಈ ಸಂಸ್ಥೆಯಲ್ಲಿ ಮಾಡಲಾಗಿದೆ. ವಾರ್ಷಿಕವಾಗಿ ಸುಮಾರು 500 ತೆರೆದ ಹೃದಯ ಶಸ್ತ್ರಚಿಕಿತ್ಸೆಗಳು ಮತ್ತು ಆಂಜಿಯೋಪ್ಲಾಸ್ಟಿಗಳನ್ನು ಬಡ ರೋಗಿಗಳಿಗೆ ಉಚಿತವಾಗಿ ಮಾಡಲಾಗಿದೆ. ಸುಮಾರು 20000 ಎಕೋಕಾರ್ಡಿಯೋಗ್ರಾಮ್‌ಗಳನ್ನು ಮಾಡಲಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಶೇ.75 ರಷ್ಟು ರೋಗಿಗಳು ಬಡತನ ರೇಖೆಗಿಂತ ಕೆಳಗಿನವರಾಗಿರುತ್ತಾರೆ.

 

       ಈ ಸಂಸ್ಥೆಯು ಅರ್ಹ ನುರಿತ ಪೂರ್ಣ ಸಮಯದ ಪ್ರಾಧ್ಯಾಪಕರುಗಳನ್ನು ಒಳಗೊಂಡಿದೆ/ 100 ಕಾರ್ಡಿಯಾಲಜಿಸ್ಟ್‌ಗಳು, 48 ಕಾರ್ಡಿಯೋಥೋರಾಸಿಕ್‌  ಸರ್ಜನ್‌ಗಳು, 40 ಕಾರ್ಡಿಯಾಕ್‌ ಅರವಳಿಕೆ ತಜ್ಞರು, 6 ವ್ಯಾಸ್ಕ್ಯುಲರ್‌ ಶಸ್ತ್ರಚಿಕಿತ್ಸಕರು ಮತ್ತು ಇತರ ಪೂರಕ ಸಿಬ್ಬಂದಿಗಳನ್ನೊಳಗೊಂಡಿದೆ.

      

                     “ಸಂಸ್ಥೆಯ ಘೋಷಣೆ”                                

                        “ ದಾನ, ಸಹಾಯಧನ ಮತ್ತು ಮಾನವೀಯ ಮೌಲ್ಯಗಳ ಅನುಸಂಧಾನ”

               “ ಈ ಆಸ್ಪತ್ರೆಗೆ ನೀಡಲಾಗುವ ದೇಣಿಗೆಗಳನ್ನು ಸೆಕ್ಷನ್‌ 80ಜಿ ಅಡಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ”

                                      

                                             ನಿರ್ದೇಶಕರ ಘೋಷ ವಾಕ್ಯ

                                             ನಾವು ಅಪೂರ್ವವಾದ ಘೋಷಣೆಯಲ್ಲಿ ಕೆಲಸ ಮಾಡುತ್ತಿದ್ದೇವೆ            

“ಆರ್ಥಿಕ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ರೋಗಿಗಳಿಗೆ ಅಗತ್ಯವಾದ ಗುಣಮಟ್ಟದ ಚಿಕಿತ್ಸೆಯನ್ನು ನೀಡಲಾಗುವುದು”

 

 

 ನೂತನವಾಗಿ ನಿರ್ಮಾಣವಾಗುತ್ತಿರುವ 325 ಹಾಸಿಗೆ ಸಾಮರ್ಥ್ಯದ ಇನ್ಫೋಸಿಸ್‌ ಫೌಂಡೇಷನ್‌ ಕಾಂಪ್ಲೆಕ್ಸ್‌ - ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು.

 

          ಇನ್ಫೋಸಿಸ್‌ ಫೌಂಡೇಶನ್‌ ಸಂಸ್ಥಾಪಕರು ಮತ್ತು ಅದ್ಯಕ್ಷ - ಎಮೆರಿಟಸ್‌, ಶ್ರೀ. ಎನ್.‌ಆರ್.‌ ನಾರಾಯಣ್‌ಮೂರ್ತಿ ಮತ್ತು ಶ್ರೀಮತಿ. ಸುಧಾಮೂರ್ತಿ ರವರು ಎಲ್ಲಾ ಪ್ರಮುಖ ವೈದ್ಯಕೀಯ ಸಲಕರಣೆಗಳ ಸೌಲಭ್ಯದ ಜೊತೆಗೆ ಹೊಸ 325 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆಯ ಇನ್ಫೋಸಿಸ್‌ ಕಾಂಪ್ಲೆಕ್ಸ್‌ ಸ್ಥಾಪನೆಗೆ ಸಂಪೂರ್ಣ ದೇಣಿಗೆ ನೀಡಿರುತ್ತಾರೆ.

         ಹೊಸ ಇನ್ಫೋಸಿಸ್‌ ಫೌಂಡೇಶನ್‌ ಕಾಂಪ್ಲೆಕ್ಸ್‌ನಲ್ಲಿ 2  ಶಸ್ತ್ರ ಚಿಕಿತ್ಸ ಕೊಠಡಿಗಳಲ್ಲಿ (ಒಂದು ಅತ್ಯಾಧುನಿಕ ಶಸ್ತ್ರ ಚಿಕಿತ್ಸಾ ಕೊಠಡಿ) /2 ಕಾರ್ಡಿಯಾಕ್‌ ಕ್ಯಾತ್ ಲ್ಯಾಬ್‌ / 100 ತುರ್ತು ಸೇವೆ ಹಾಸಿಗೆಗಳು ಮತ್ತು 225 ಸಾಮಾನ್ಯ ಹಾಸಿಗೆಯ ವಾರ್ಡಗಳನ್ನು ಒಳಗೊಂಡಿರುತ್ತದೆ. ಈ ಕಾಂಪ್ಲೆಕ್ಸ್‌ನ್ನು ಮುಖ್ಯ ಕಟ್ಟಡಕ್ಕೆ ಸೇತುವೆಯ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ಈ ಸೇತುವೆಯ ಮೂಲಕ ಇದರಲ್ಲಿ ಎಲ್ಲಾ ತಜ್ಞರು, ಸಿಬ್ಬಂದಿಗಳು ಮತ್ತು ರೋಗಿಗಳು ಸುಲಭವಾಗಿ ಹೊಸ ಕಾಂಪ್ಲೆಕ್ಸ್‌ಗೆ ಹೋಗಬಹುದು.  ಈ ಹೊಸ ಬ್ಲಾಕ್‌  ಆಗಸ್ಟ್‌- ಸೆಪ್ಟಂಬರ್‌ 2021ರೊಳಗೆ ಕಾರ್ಯನಿರ್ವಹಿಸಲಿದೆ. 

 

ಬೆಂಗಳೂರಿನ ಜಯದೇವ ಆಸ್ಪತ್ರೆಯ ಆವರಣದಲ್ಲಿ ಕಾರ್ಡಿಯಾಕ್‌ ಪುನರ್ವಸತಿ ಕೇಂದ್ರ(ಸಿಆರ್‌ಸಿ ಬ್ಲಾಕ್‌)

 

ನೀಡಿ ಹಾರ್ಟ್‌ ಫೌಂಡೇಷನ್‌ ಬೆಂಗಳೂರು ಮತ್ತು ಇಂದಿರಾನಗರ ರೋಟರಿ ಸಂಸ್ಥೆಯ ಸಹಯೋಗದೊಂದಿಗೆ 2019 ರಲ್ಲಿ ಸ್ಥಾಪಿಸಲಾಗಿದೆ

        ಪುನರ್ವಸತಿಯ ಕೇಂದ್ರದ ಸ್ಥಾಪನೆಯ ಮುಖ್ಯ ಉದ್ದೇಶವು ರೋಗಿಗಳಿಗೆ ಶಕ್ತಿಯನ್ನು ಮರಳಿ ಪಡೆಯಲು ಸಹಾಯ ಮಾಡುವುದು, ಹದಗೆಡುತ್ತಿರುವ ಸ್ಥಿತಿಯನ್ನು ಸುಧಾರಿಸುವುದು, ಹೃದಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಿ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಿ ಹಾಗೂ ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುವುದು, ಮಾನಸಿಕೆ ಒತ್ತಡವನ್ನು ಕಡಿಮೆ ಮಾಡಿ ಸಾಧ್ಯವಾದಷ್ಟು ಬೇಗ ತಮ್ಮ ದೈನಂದಿನ ಕೆಲಸಕ್ಕೆ ಮರಳಲು ಸಹಾಯ ಮಾಡುವುದು

        ಇದು ವ್ಯಾಯಾಮ, ಶಿಕ್ಷಣ, ಪ್ರೇರಣೆ ಮತ್ತು ಜೀವನಶೈಲಿಯ ಮಾರ್ಪಾಡುಗಳ ಮೂಲಕ ಹೃದಯ ರೋಗಿಗಳಿಗೆ ತಮ್ಮ ಸಾಮಾನ್ಯ ಚಟುವಟಿಕೆಗೆ ಮರಳಲು ಬಹು ಶಿಸ್ತಿನಿಂದ ವೈದ್ಯಕೀಯ ಮೇಲ್ವಿಚಾರಣೆ ನಡೆಸುವ ಒಂದು ಕಾರ್ಯಕ್ರಮವಾಗಿದೆ.

        ಹೃದ್ರೋಗ ತಜ್ಞರು / ಕುಟುಂಬ ವೈದ್ಯರು / ಹೃದಯ ಶಸ್ತ್ರ ಚಿಕಿತ್ಸಕರು / ಹೃದಯ ಶುಶ್ರೂಷಕರು/ ಭೌತ ಚಿಕಿತ್ಸಕರು /ಆಹಾರ ಮತ್ತು ಪೌಷ್ಟಿಕಾಂಶ ತಜ್ಞರು/ ಶ್ವಾಸಕೋಶ ಚಿಕಿತ್ಸಕರು/ ಮನಶಾಸ್ತ್ರಜ್ಞರು/ ವೈದ್ಯಕೀಯ ಸಮಾಜ ಸೇವಕರು/ ಯೋಗ ಚಿಕಿತ್ಸಕರು ಇತ್ಯಾದಿಗಳನ್ನು ಒಳಗೊಂಡಿರುವ ತಂಡವು ರೋಗಿಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ಹೃದ್ರೋಗ ಚಿಕಿತ್ಸಾ ನಂತರ ಅನುಸರಿಸಬೇಕಾಗಿರುವ ಶಿಷ್ಠಾಚಾರಗಳು, ದೈಹಿಕ ಚಟುವಟಿಕೆ, ಸಮಾಲೋಚನೆ, ಗಾಯದ ಆರೈಕೆ ಮತ್ತು ನೈರ್ಮಲ್ಯ, ಸರಿಯಾದ ಔಷಧಿ, ಅನುಸರಣೆ ಇತ್ಯಾದಿಗಳ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದೆ.

 

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಮುಖ್ಯ ಶಾಖೆಯೊಂದಿಗೆ ಸ್ಟೇಟ್‌ ಆಫ್‌ ಆರ್ಟ್‌ ಶಾಖೆಗಳಾದ  ರಾಜಾಜಿನಗರದ ಇಎಸ್‌ಐಸಿ-ಎಂಎಚ್‌, ಮೈಸೂರು ಮತ್ತು ಕಲಬುರಗಿ  ಶಾಖೆಗಳನ್ನೊಳಗೊಂಡಿದೆ.

 

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮೈಸೂರು ಶಾಖೆ, ಮೈಸೂರು

 

ಮೈಸೂರಿನಲ್ಲಿ  ಹೊಸ 400 ಹಾಸಿಗೆ ಸಾಮರ್ಥ್ಯದ ಹೃದ್ರೋಗ ಸಂಕೀರ್ಣ

2018 ಆಗಸ್ಟ್‌ನಿಂದ ಎಲ್ಲಾ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ.

        ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಮೈಸೂರು ಶಾಖೆಯು  400 ಹಾಸಿಗೆ ಸಾಮರ್ಥ್ಯದ ಹೊಸ ಆಸ್ಪತ್ರೆಯ ಕಾಂಪ್ಲೆಕ್ಸ್‌ ಆಗಸ್ಟ್‌ 2018 ರಿಂದ ಕೆ.ಆರ್‌.ರಸ್ತೆ,  ಕುಂಬಾರಕೊಪ್ಪಲು, ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಹೆಚ್ಚಿನ ರೋಗಿಗಳನ್ನು ಆಕರ್ಷಿಸುತ್ತಿದೆ. ಈ ನೆರೆಯ ಜಿಲ್ಲೆಗಳಾದ ಕೊಡಗು, ಚಾಮರಾಜನಗರ, ಹಾಸನ, ಮಂಡ್ಯದ ರೋಗಿಗಳ ಅಗತ್ಯೆಗಳನ್ನು ಪೂರೈಸುತ್ತಿದೆ.

ಆಸ್ಪತ್ರೆಯಲ್ಲಿ ಲಭ್ಯವಿರುವ ಸೇವೆಗಳು

 • 24 ಗಂಟೆಗಳ ತುರ್ತು ಸೇವೆಗಳು, ಐಸಿಸಿಯು

 • 24 ಗಂಟೆಗಳ ಆಂಬ್ಯುಲೆನ್ಸ್‌ ಸೇವೆಗಳು

 • ಕ್ಯಾಷುಯಲ್ಟಿ /ತುರ್ತು ಹೊರರೋಗಿ ವಿಭಾಗ

 • ಸಾಮಾನ್ಯ ಹೊರರೋಗಿ ವಿಬಾಗ

 • ವಿಶೇಷ ಹೊರರೋಗಿ ವಿಭಾಗ (ಮಾಸ್ಟರ್‌ ಕಾರ್ಡಿಯಾಕ್‌ ಚೆಕ್‌ ಅಪ್‌)

 • ಕಲರ್‌ ಡಾಪ್ಲರ್‌ ಎಕೋ ಕಾರ್ಡಿಯೋಗ್ರಫಿ, 3ಡಿ ಎಕೋ, ಸ್ಟ್ರೆಸ್‌ ಎಕೋ, ಟಿಇಇ, ಸ್ಟ್ರೆಸ್‌ ಇಸಿಜಿ (ಟಿಎಂಟಿ)

 • ಕಾರ್ಡಿಯಾಕ್‌ ಕ್ಯಾತಟರೈಸೇಷನ್‌, ಕರೋನರಿ ಆಂಜಿಯೋಗ್ರಾಮ್‌, ಆಂಜಿಯೋಪ್ಲಾಸ್ಟಿ, ಸ್ಟೆಂಟಿಂಗ್‌, ವಾಲ್ವುಲೋಪ್ಲಾಸ್ಟಿ, ಡಿವೈಸ್‌ ಕ್ಲೋಷರ್‌ ಇತ್ಯಾದಿ.

 • ಎಲೆಕ್ಟ್ರೋಫಿಜಿಯಾಲಜಿ ಸೇವೆಗಳು

 • ತೆರೆದ ಹೃದಯ ಶಸ್ತ್ರಚಿಕಿತ್ಸೆ ಕಾರ್ಯಕ್ರಮ – ವಾಲ್ವ್ ರಿಪ್ಲೇಸ್‌ಮೆಂಟ್‌, ಬೈಪಾಸ್‌ ಸರ್ಜರಿ ಇತ್ಯಾದಿ.

 • ನಾಳೀಯ(ವ್ಯಾಸ್ಕುಲರ್‌) ಶಸ್ತ್ರಚಕಿತ್ಸೆ ಸೇವೆಗಳು

 • 24/7  ಪ್ರಯೋಗಾಲಯ  ಸೇವೆಗಳು  –  ಬಯೋಕೆಮಿಸ್ಟ್ರೀ,  ಪೆಥಾಲಜಿ,  ಮೈಕ್ರೋಬಯಾಲಜಿ  ಮತ್ತು  ಬ್ಲಡ್‌ ಸೆಂಟರ್‌(ರಕ್ತ ಕೇಂದ್ರ) ಸೇವೆಗಳು.

 • ಸಿ.ಟಿ. ಮತ್ತು ಎಂಆರ್‌ಐ ಸ್ಕ್ಯಾನ್‌ ಸೌಲಭ್ಯ

 • ನ್ಯೂಕ್ಲಿಯರ್‌ ಕಾರ್ಡಿಯಾಲಜಿ ಸೇವೆಗಳು

 • ತುರ್ತು ಸೇವಾ ಘಟಕಗಳು,

 • ಸಾಮಾನ್ಯ ವಾರ್ಡ್‌ಗಳು,

 • ವಿಶೇಷ ವಾರ್ಡ್‌ಗಳು ಮತ್ತು ಡಿಲಕ್ಸ್‌ ವಾರ್ಡ್‌ಗಳು

 

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಇಎಸ್‌ಐಸಿ-ಎಂಹೆಚ್‌ ರಾಜಾಜಿನಗರ, ಬೆಂಗಳೂರು

75 ಹಾಸಿಗೆ ಸಾಮರ್ಥ್ಯದೊಂದಿಗೆ ಕಾರ್ಡಿಯಾಕ್‌ ಮತ್ತು ಕಾರ್ಡಿಯೋಥೋರಾಸಿಕ್‌ ಸರ್ಜರಿ ಸೌಲಭ್ಯಗಳು

18 ಸೆಪ್ಟೆಂಬರ್‌ 2012 ರಿಂದ ಚಾಲನೆಯಲ್ಲಿದ್ದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

           ಇಎಸ್‌ ಐಸಿ ಫಲಾನುಭವಿಗಳಿಗೆ ಹೃದಯ ಆರೈಕೆ  ಸೌಲಭ್ಯವನ್ನು ಒದಗಿಸಲು ಇಎಸ್‌ ಐಸಿ-ಎಂಹೆಚ್‌  ರಾಜಾಜಿನಗರ, ಬೆಂಗಳೂರು ಇಲ್ಲಿ ಜಯದೇವ ಆಸ್ಪತ್ರೆ ಘಟಕವನ್ನು 2012ರಲ್ಲಿ ಇಒಎಂ ಮಾದರಿಯಲ್ಲಿ (ಸಜ್ಜುಗೊಳಿಸಿ, ಕಾರ್ಯಾಚರಣೆ ಮತ್ತು ನಿರ್ವಹಣೆ) ಸ್ಥಾಪಿಸಲಾಯಿತು. ಇದರಲ್ಲಿ ಕ್ಯಾಥ್ಯ್ಲಾಬ್‌ ಕಾರ್ಯವಿಧಾನಗಳಾದ  ಕರೋನರಿ ಅಂಜಿಯೋಗ್ರಾಮ್‌ , ಅಂಜಿಯೋಪ್ಲಾಸ್ಟಿ ಜೋತೆಗೆ ಸ್ಟಂಟಿಂಗ್‌ , ಬಲೂನ್‌ ವಾಲ್ವುಲೋಪ್ಲ್ಯಾಸ್ಟಿಗಳು, ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ನೆಡೆಸಲು ಕಾರ್ಡಿಯೋಥೋರಾಸಿಕ್‌ ಘಟಕವನ್ನು ಸಹ ಸ್ಥಾಪಿಸಲಾಗದೆ.

 

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಕಲಬುರಗಿ ಶಾಖೆ, ಕಲಬುರಗಿ

 

   130 ಹಾಸಿಗೆ ಸಾಮರ್ಥ್ಯದ ಕಲಬುರಗಿ ಶಾಖೆಯು ಕಾರ್ಡಿಯಾಲಜಿ ಮತ್ತು ಕಾರ್ಡಿಯೋಥೋರಾಸಿಕ್‌ ಸೌಲಭ್ಯಗಳನ್ನು ಹೊಂದಿದೆ (ಜಿಮ್ಸ್‌ ಆವರಣ, ಸೇಡಂ ರಸ್ತೆ, ಕಲಬುರಗಿ)

23 ಏಪ್ರಿಲ್‌ 2016 ರಿಂದ ಚಾಲನೆಯಲ್ಲಿದ್ದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ

 

 

 

ಕಲಬುರಗಿಯಲ್ಲಿ 300 ಹಾಸಿಗೆ ಸಾಮರ್ಥ್ಯದ ಹೊಸದಾಗಿ ನಿರ್ಮಾಣವಾಗುತ್ತಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ತೆಯ ಸಂಕೀರ್ಣ

 

         ಶ್ರೀ ಜಯದೇವ ಆಸ್ಪತ್ರೆಯ ಕಲ್ಯಾಣ ಕರ್ನಾಟಕ ಪ್ರದೇಶದ ಜನರ ಬಹುದಿನಗಳ ಬೇಡಿಕೆಯಾಗಿದ್ದು, ಆ ಪ್ರದೇಶದ ಸರ್ಕಾರಿ ವಲಯದಲ್ಲಿ ಇಂತಹ ಯಾವುದೇ ಸೌಲಭ್ಯಗಳು ಇಲ್ಲದ ಕಾರಣದ ಹಾಗೂ ಉತ್ತರ ಕರ್ನಾಟಕ ಪ್ರದೇಶದ ಜಿಲ್ಲೆಗಳಾದ ಬಳ್ಳಾರಿ, ಯಾದಗಿರಿ, ರಾಯಚೂರು, ಬೀದರ್‌, ಕೊಪ್ಪಳ, ವಿಜಯನಗರ ಮತ್ತು ಕಲಬುರಗಿ ಜಿಲ್ಲೆಗಳ ಅಗತ್ಯಗಳನ್ನು ಪೂರೈಸಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದೊಂದಿಗೆ  300 ಹಾಸಿಗೆ ಸಾಮರ್ಥ್ಯದ ಸರ್ಕಾರದಿಂದ ಮಂಜೂರಾದ ಸ್ವಂತ ಜಾಗದಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಘಟಕವನ್ನು ನಿರ್ಮಿಸಲು 2019-20 ರ ಆರ್ಥಿಕ ವರ್ಷದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ತಮ್ಮ ಬಜೆಟ್‌ ಬಾಷಣದಲ್ಲಿ ಘೋಷಿಸಿದ್ದಾರೆ.

ಕಲಬುರಗಿ ಶಾಖೆಯಲ್ಲಿ ಲಭ್ಯವಿರುವ ಹೊಸ ಮೂಲಸೌಕರ್ಯಗಳು

 • ಒಂದು ಹೈಬ್ರಿಡ್‌ ಶಸ್ತ್ರಚಿಕಿತ್ಸಾ ಕೊಠಡಿ

 • ಎರಡು ಶಸ್ತ್ರಚಿಕಿತ್ಸಾ ಕೊಠಡಿಗಳು

 • ಮೂರು ಕಾರ್ಡಿಯಾಕ್‌ ಕ್ಯಾತ್‌ಲ್ಯಾಬ್‌ಗಳು

 • 4 ಕಾರ್ಡಿಯಾಕ್‌ ಐಸಿಸಿಯುಗಳು (ತೀವ್ತ ನಿಘಾ ಆರೈಕೆ ಘಟಕ)

 • 15 ಹಾಸಿಗೆಗಳ ಸರ್ಜಿಕಲ್‌ ಐಸಿಸಿಯು (ತೀವ್ತ ನಿಘಾ ಆರೈಕೆ ಘಟಕ)

 • 12 ಹಾಸಿಗೆಗಳ ಶಸ್ತ್ರಚಿಕಿತ್ಸಾ ನಂತರದ ಚೇತರಿಕೆ ವಾರ್ಡ್‌

 • 12 ಹಾಸಿಗೆಗಳ ಪೂರ್ವ ಕ್ಯಾತ್‌ ವಾರ್ಡ್‌

 • 60 ಹಾಸಿಗೆಗಳ ಪುರುಷರ ಸಾಮಾನ್ಯ ವಾರ್ಡ್‌

 • 30 ಹಾಸಿಗೆಗಳ ಮಹಿಯರ ಸಾಮಾನ್ಯ ವಾರ್ಡ್‌

 • 31 ಹಾಸಿಗೆಗಳ ಅರೆ ವಿಶೇಷ ವಾರ್ಡ್‌

 • 6 ಹಾಸಿಗೆಗಳ ವಿಶೇಷ ವಾರ್ಡ್‌

 • 4 ಹಾಸಿಗೆಗಳ ಡೀಲಕ್ಸ್‌ ವಾರ್ಡ್

 • 24 ಹಾಸಿಗೆಗಳ ಮಕ್ಕಳ ವಾರ್ಡ್‌

 • 4 ಹಾಸಿಗೆಗಳ ಐಸೋಲೇಷನ್‌ ವಾರ್ಡ್‌

ಈ ಹೊಸ ಸಂಕೀರ್ಣದ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದ್ದು ಇನ್ನು 2 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.

 

 

ಇತ್ತೀಚಿನ ನವೀಕರಣ​ : 17-07-2021 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080